Telegram Join My Telegram WhatsApp Join My WhatsApp

Karnataka 2nd PUC Result 2026: ಪಾಸ್ ಆಗೋದು ಈಗ ಸುಲಭ! ಹೊಸ ನಿಯಮ ಏನು?

KSEAB Board 2026 - Exam Dates (Out), Model Papers, Pattern, Result

ಕರ್ನಾಟಕದ ವಿದ್ಯಾರ್ಥಿಗಳಿಗೆ ದೊಡ್ಡ ಅಪ್‌ಡೇಟ್ ಬಂದಿದೆ. Karnataka School Examination and Assessment Board ಈ ವರ್ಷ 2nd PUC ಪರೀಕ್ಷೆಯ ಪಾಸ್ ಮಾರ್ಕ್‌ಗಳನ್ನು ಕಡಿಮೆ ಮಾಡಿದೆ.

ಇದರಿಂದ ವಿದ್ಯಾರ್ಥಿಗಳಿಗೆ ಪಾಸ್ ಆಗೋದು ಇನ್ನಷ್ಟು ಸುಲಭವಾಗಲಿದೆ. ಈ ಮೊದಲು 35% ಬೇಕಾಗಿದ್ದರೆ, ಈಗ ಕೇವಲ 30% ಅಂಕಗಳು ಸಾಕು ಎಂದು ಹೊಸ ನಿಯಮ ಪ್ರಕಟಿಸಲಾಗಿದೆ.

ಅಧಿಕೃತ ಮಾಹಿತಿ ಪ್ರಕಾರ, ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 30 ಅಂಕಗಳು (ಥಿಯರಿ + ಇಂಟರ್ನಲ್) ಪಡೆಯಬೇಕು. ಜೊತೆಗೆ ಒಟ್ಟು 600 ಅಂಕಗಳಲ್ಲಿ 198 ಅಂಕಗಳು (33%) ಪಡೆದರೆ ಪಾಸ್ ಆಗಬಹುದು.

📢 Latest Update: 2026ರ ಕರ್ನಾಟಕ 2nd PUC ಫಲಿತಾಂಶವನ್ನು ಏಪ್ರಿಲ್ 9 ರಂದು ಪ್ರಕಟಿಸುವ ಸಾಧ್ಯತೆ ಇದೆ. ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಹಿಂದಿನ ವರ್ಷದ ಅಂಕಿ-ಅಂಶಗಳನ್ನು ನೋಡಿದರೆ, ಒಟ್ಟು 73.45% ಪಾಸ್ ಪರ್ಸೆಂಟೇಜ್ ದಾಖಲಾಗಿದೆ. ಸುಮಾರು 6.37 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಹೆಣ್ಣುಮಕ್ಕಳು ಮತ್ತೆ ಮೇಲುಗೈ ಸಾಧಿಸಿದ್ದು, ಅವರ ಪಾಸ್ ಪ್ರಮಾಣ 77.8% ಆಗಿದ್ದರೆ, ಗಂಡು ವಿದ್ಯಾರ್ಥಿಗಳದು 68.2% ಆಗಿತ್ತು. ನಗರ ಪ್ರದೇಶದ ವಿದ್ಯಾರ್ಥಿಗಳು (74.55%) ಗ್ರಾಮೀಣ ವಿದ್ಯಾರ್ಥಿಗಳಿಗಿಂತ (69.33%) ಹೆಚ್ಚು ಸಾಧನೆ ಮಾಡಿದ್ದಾರೆ.

ಇದಲ್ಲದೆ, ರಾಜ್ಯದ 123 ಕಾಲೇಜುಗಳಲ್ಲಿ ಒಂದೇ ವಿದ್ಯಾರ್ಥಿಯೂ ಪಾಸ್ ಆಗದಿರುವುದು ಆತಂಕ ಮೂಡಿಸಿದೆ.

ಈ ಹೊಸ ನಿಯಮದಿಂದ ವಿದ್ಯಾರ್ಥಿಗಳ ಮೇಲೆ ಇರುವ ಒತ್ತಡ ಕಡಿಮೆಯಾಗಲಿದ್ದು, ಈ ವರ್ಷ ಪಾಸ್ ಪರ್ಸೆಂಟೇಜ್ ಹೆಚ್ಚಾಗುವ ನಿರೀಕ್ಷೆಯಿದೆ.

Leave a Comment

Your email address will not be published. Required fields are marked *

Scroll to Top